ವರ್ಕ್ ಶಾಪ್ ಪ್ರಶ್ನೋತ್ತರಗಳು (FAQ )

ವರ್ಕ್ ಶಾಪ್ ಗೆ ಎಂದೇ ಒಂದು ಪುಸ್ತಕವಿಡೀ . ಪ್ರತಿ ದಿನ ವರ್ಕ್ ಶಾಪ್ ನಡೆಯುವಾಗ ಅದರಲ್ಲಿ ಪಾಯಿಂಟ್ ಗಳನ್ನು ಬರೆದುಕೊಳ್ಳಿ . ಪ್ರತಿ ದಿನ ಅದನ್ನು ಓದಿಕೊಳ್ಳಿ . ಅಂತೆಯೇ ಪಾಲಿಸಿ . ವರ್ಕ್ ಶಾಪ್ ಗೆಂದೇ ಒಂದು ಪುಸ್ತಕ ಹಾಗು ಪೆನ್ನು ಸಿದ್ಧವಾಗಿಟ್ಟುಕೊಳ್ಳಿ . zoom app ಡೌನ್ಲೋಡ್ ಮಾಡಿಕೊಳ್ಳಿ .ಹೆಚ್ಚು ಗಲಾಟೆಯಿಲ್ಲದ ಜಾಗದಲ್ಲಿ ಕುಳಿತುಕೊಳ್ಳಿ .ಗಮನವಿಟ್ಟು ಕೇಳಿ . 

ಪ್ರಕೃತಿ ಅನಾಲಿಸಿಸ್  ಫಾರಂ ತುಂಬುವ ಬಗೆ ನಿಮಗೆ ೨ ನೇ ದಿನ ಹೇಳಿಕೊಡಲಾಗುತ್ತದೆ .  ಪ್ರಕೃತಿ ಅನಾಲಿಸಿಸ್ ಫಾರಂ ಎರಡನೇ  ದಿನದ ವರ್ಕ್ ಶಾಪ್ ಆದಮೇಲೆ ತುಂಬಬೇಕು . ಪ್ರಕೃತಿ ಅನಾಲಿಸಿಸ್ ಫಾರಂ ತುಂಬುವಾಗ ಸರಿಯಾದ ನಿಮ್ಮ ಇಮೇಲ್ ಹಾಕಿ . ನಂತರ ನಿಮ್ಮ ಇಮೇಲ್ ನಲ್ಲಿ ಇನ್ಬಾಕ್ಸ್ ,  ಸ್ಪಾಮ್ ಫೋಲ್ಡರ್ ಹಾಗೇ ಬಿನ್ ಫೋಲ್ಡರ್ ಗಳನ್ನು ನೋಡಿ . ಅಲ್ಲಿ ನಿಮಗೆ webmaster@drsavithasuri.com ಇಂದ ಇಮೇಲ್ ಬಂದಿರುತ್ತದೆ . 

ನಿಮಗೆ webmaster@drsavithasuri.com  ಬಂದಿರುವ  ಇಮೇಲ್ ನಲ್ಲಿ ನಿಮ್ಮ ಪ್ರಕೃತಿ ಅನಾಲಿಸಿಸ್ ರಿಪೋರ್ಟ್ ಇರುತ್ತದೆ . ಅದನ್ನು ನಿಮ್ಮ ಪುಸ್ತಕದಲ್ಲಿ ಗುರುತು ಹಾಕಿಕೊಳ್ಳಿ . ಉದಾಹರಣೆಗೆ – ವಾತ ೧೧, ಪಿತ್ತ ೧೩, ಕಫ ೧೬ ಹೀಗೆ . 

ನಿಮಗೆ ಒಂದು ಗೂಗಲ್ ಫಾರಂ ನೀಡಲಾಗುತ್ತದೆ. ಇದರಲ್ಲಿ  ನಿಮ್ಮ ಲ್ಯಾಬ್ ರಿಪೋರ್ಟ್ ಹಾಗೂ ಪ್ರಕೃತಿ ಅನಾಲಿಸಿಸ್ ರಿಪೋರ್ಟ್ ತುಂಬಿಸಿ submit button ಒತ್ತಬೇಕು . ಆಗ ಈ ರಿಪೋರ್ಟ್ ನಮಗೆ ಬರುತ್ತದೆ  . ಇದನ್ನು ನೋಡಿ ವರ್ಕ್ ಶಾಪ್ ಕಡೆಯ ದಿನ ನಿಮಗೆ  ಸಲಹೆ ನೀಡಲಾಗುತ್ತದೆ 

ನಿಮ್ಮ ಲ್ಯಾಬ್ ರಿಪೋರ್ಟ್ ಒಂದು ವರ್ಷದ ಒಳಗೆ ಇದ್ದರೆ ( April 23-March 24) ಹೊಸ ರಿಪೋರ್ಟ್ ಅವಶ್ಯಕತೆ ಇರುವುದಿಲ್ಲ . ನಿಮ್ಮ ರಿಪೋರ್ಟ್ ನಿಂದ ಬರಿ ಈ ಟೆಸ್ಟ್ ಗಳನ್ನು ಮಾತ್ರ ನೋಡಲಾಗುತ್ತದೆ ಅಷ್ಟನ್ನು ಮಾತ್ರ ತುಂಬಿಸಿ .  Ultra scan, T3-T4-TSH, HbA1c, LH, FSH, AMH (optional). ಸರಿಯಾಗಿ ಎಚ್ಚರಿಕೆಯಿಂದ ತುಂಬಿಸಿ . 

ನಿಮ್ಮಲ್ಲಿ ಲ್ಯಾಬ್ ರಿಪೋರ್ಟ್ ಇಲ್ಲವೆಂದರೆ ನಿಮಗೆ ನೀಡಲಾಗಿರುವ ಲ್ಯಾಬ್ ಪ್ರಿಸ್ಕ್ರಿಪ್ಷನ್ ತೆಗೆದುಕೊಂಡು ಒಳ್ಳೆ ಲ್ಯಾಬ್ ನಲ್ಲಿ ರಿಪೋರ್ಟ್ ಮಾಡಿಸಿ . ನಂತರ ಒಟ್ಟಿಗೆ ಫಾರಂ ತುಂಬಿಸಿ . 

ನಿಮಗೆ ಫಾರಂ ತುಂಬಿಸಲು 15 ದಿನಗಳ ಅವಕಾಶವಿರುತ್ತದೆ . 

ನಿಮಗೆ ಸಂದೇಹಗಳಿದ್ದಾಗ ವರ್ಕ್ ಶಾಪ್ ನಂತರ ಸೋಮವಾರ, ಬುಧವಾರ ಹಾಗೂ ಶುಕ್ರವಾರ ,  zoom class ನಲ್ಲಿ  ಉತ್ತರಿಸಲಾಗುತ್ತದೆ .

ಮಿಕ್ಕ ದಿನಗಳಲ್ಲಿ ಗ್ರೂಪ್ ನಲ್ಲಿ ಮಾತ್ರ ಉತ್ತರಿಸಲಾಗುತ್ತದೆ . 

ಇದಲ್ಲದೆ ಬೇರೇ ಯಾವುದೇ ಪ್ರಶ್ನೆಗಳಿದ್ದರೂ ವರ್ಕ್ ಶಾಪ್  ವಾಟ್ಸಪ್  ಗ್ರೂಪ್ ನಲ್ಲಿ ಕೇಳಬಹುದು . ನಿಮ್ಮ ಏನೇ ಪ್ರಶ್ನೆಗಳಿದ್ದರೂ ನಿಮ್ಮ ವರ್ಕ್ ಶಾಪ್  ವಾಟ್ಸಪ್  ಗ್ರೂಪ್ ನಲ್ಲಿ ಮಾತ್ರ ಕೇಳಬೇಕು . ಇಲ್ಲವಾದಲ್ಲಿ ಉತ್ತರಿಸಲಾಗುವುದಿಲ್ಲ .

ಪ್ರತಿ ಹಿಂದಿನ ದಿನ ನಿಮಗೆ  assignment ನೀಡಲಾಗಿರುತ್ತದೆ . ದಯವಿಟ್ಟು ಅದನ್ನು ಪೂರೈಸಿರಿ . ನಿಮ್ಮನ್ನು  FaceBook ಮತ್ತು WhatsApp VIP ಗ್ರೂಪ್ ಗಳಲ್ಲಿ ಸೇರಿಸಲಾಗುತ್ತದೆ ಅಲ್ಲಿ ಚಟುವಟಿಕೆಗಳಲ್ಲಿ ಭಾಗವಹಿಸಿ . 

ದಿನ-೧- PCOS ಬಗ್ಗೆ ಪೂರ್ಣವಾಗಿ ವಿವರಿಸಲಾಗುತ್ತದೆ  – ನಿಮಗಿರುವ PCOS ಯಾವುದೆಂದು ಅರ್ಥವಾಗುತ್ತದೆ . ಪ್ರಕೃತಿ ಅನಾಲಿಸಿಸ್ – ಈ ದಿನ ನಿಮ್ಮ ದೇಹದ ಪ್ರಕೃತಿಯ ಬಗ್ಗೆ ಆಯುರ್ವೇದ ತತ್ವಗಳ ಮೂಲಕ ತಿಳಿದುಕೊಳ್ಳುತ್ತೀರಿ . ನಿಮ್ಮ ದೇಹ ಪ್ರಕೃತಿ ಯಾವುದೆಂದು ತಿಳಿಯುತ್ತದೆ . 
ದಿನ-೨- ನಿಮ್ಮ ದೇಹ ಪ್ರಕೃತಿಗೆ ತಕ್ಕಂತೆ PCOS ರಿವರ್ಸ್ ಮಾಡಲು ಯಾವ ಆಹಾರ ಹೇಗೆ ತೆಗೆದುಕೊಳ್ಳಬೇಕೆಂದು ತಿಳಿಯುತ್ತದೆ . 
ದಿನ-೩- ನಿಮ್ಮ ದೇಹ ಪ್ರಕೃತಿಗೆ ತಕ್ಕಂತೆ PCOS ರಿವರ್ಸ್ ಮಾಡಲು ಯಾವ ವ್ಯಾಯಾಮಗಳನ್ನು ಮಾಡಬೇಕೆಂದು ತಿಳಿಯುತ್ತದೆ
ದಿನ -೪-  PCOS ರಿವರ್ಸ್ ಮಾಡಲು ಬೇಕಾದ ಆಯುರ್ವೇದ ಔಷಧಿಗಳು , ಸೌಂದರ್ಯ ಪ್ರಸಾಧನಗಳ ಬಗ್ಗೆ ತಿಳಿಸಲಾಗುತ್ತದೆ . 
ದಿನ-೫- PCOS ರಿವರ್ಸ್ ಮಾಡಲು ಬೇಕಾದ ದಿನಚರಿ ಹೇಗೆ ರೂಪಿಸಿಕೊಳ್ಳಬೇಕೆಂದು ತಿಳಿಸಲಾಗುತ್ತದೆ . 
 
Scroll to Top
Open chat
1
Hello
Can we help you?